SLB

ಸಾರ್ಥ

Year : 1998
Publisher : Sahitya Bhandara, Bengaluru
Reprints : 12

ಸಾರ್ಥದ  ಮರ್ಮವನ್ನು  ತಿಳಿಯಲು ಮನೆ ಮಾರು ಬಿಟ್ಟುಹೋದ  ನಾಗಭಟ್ಟನು ತನ್ನ ಗುರಿಯಿಲ್ಲದ  ಸಂಚಾರಿಪರಿಕ್ರಮದಲ್ಲಿ ಜನಪದದ ಜೀವನಾಡಿಯಂತಿದ್ದ  ಹತ್ತಾರು ಧಾರ್ಮಿಕ, ಸಾಮಾಜಿಕ  ಮತ್ತು ಸಾಂಸ್ಕೃತಿಕ ಪ್ರವೃತ್ತಿಗಳ  ಪ್ರಭಾವಕ್ಕೊಳಗಾಗಿ  ಆಚ್ಚರಿಯ  ಜೀವನದರ್ಶನಕ್ಕೆ  ಸಾಕ್ಷಿಯಾಗುತ್ತಾನೆ .

‘ಸಾರ್ಥ’ ಕ್ರಿ .ಶ. ಎಂಟನೆಯ  ಶತಮಾನದ  ಭರತಖಂಡದಲ್ಲಿ ನಡೆಯಿತೆಂದು  ಕಲ್ಪಿಸಿಕೊಳ್ಳಬೇಕಾದ  ಸಂಗತಿಗಳನ್ನಾಧರಿಸಿದ  ಕಾದಂಬರಿ. ಆನೆ  ಕುದುರೆ ಹೇಸರಗತ್ತೆ   ನೂರಾರು  ಗಾಡಿಗಳ ಮೇಲೆ ವಾಣಿಜ್ಯ  ಪದಾರ್ಥಗಳನ್ನು  ಹೇರಿಕೊಂಡು  ವ್ಯಾಪಾರ  ಮಾಡುತ್ತ  ದೂರ ದೂರ ದೇಶಗಳಲ್ಲಿ  ಸಂಚರಿಸುವುದನ್ನು ಆ ಕಾಲದಲ್ಲಿ  ‘ಸಾರ್ಥ’ ಎನ್ನುತಿದ್ದರು .ಭಾರತದ  ಇತಿಹಾಸದ  ಒಂದು   ಸ್ಥಿತ್ಯಂತರ  ಅವಧಿಯ ಈ ಕಾದಂಬರಿಯಲ್ಲಿ  ಅಪೂರ್ವ ಅನುಭವ ಮತ್ತು ಪಾತ್ರಗಳು ಒಡಮೂಡಿವೆ. ಆಳವೂ  ವಿಸ್ತಾರವೂ  ಆದ ಐತಿಹಾಸಿಕ ಅಧ್ಯನಯದ ಅಡಿಪಾಯದ ಮೇಲೆ ಶಕ್ತ  ಸೃಜನಶೀಲತೆಯು ಕೆಲಸಮಾಡಿ ಈ  ವಿಶಿಷ್ಟ  ಕಾದಂಬರಿಯನ್ನು  ನಿರ್ಮಿಸಿದೆ .

ಭಾರತವು  ಸತತವಾಗಿ  ಎದುರಿಸುತ್ತಿರುವ  ಧಾರ್ಮಿಕ ಸಂಘರ್ಷಗಳ ತಾತ್ತ್ವಿಕಬೇರುಗಳನ್ನು ‘ಸಾರ್ಥ’ ಸೃಜನಶೀಲವಾಗಿ ಅನ್ವೇಷಿಸುತ್ತದೆ.

Back To Top