Year | : | 1973 |
Publisher | : | Sahitya Bhandara, Bengaluru |
Reprints | : | 15 |
‘ದಾಟು’ ಜಾತಿ ಸಮಸ್ಯೆಯನ್ನು ಕುರಿತು ಭಾರತೀಯ ಭಾಷೆಗಳಲ್ಲಿ ಬಂದಿರುವ ಕಾದಂಬರಿಗಳಲ್ಲೆಲ್ಲ ವಿಶಿಷ್ಟವಾದ ಕೃತಿ ಎಂದು ಪರಿಗಣಿತವಾಗಿದೆ. ಪಶ್ಚಿಮದಿಂದ ಎರವಲು ಪಡೆದ ಅಥವಾ ಸಮಕಾಲೀನ ರಾಜಕೀಯ ಒತ್ತಡದಿಂದ ಹುಟ್ಟಿದ ಸಿದ್ಧಾಂತಗಳನ್ನವಲಂಬಿಸದೆ ಸಾಂದ್ರವಾದ ಜೀವನಾನುಭವವನ್ನೊಳಗೊಂಡು ಭಾರತೀಯ ಸಾಮಾಜಿಕ ಪರಂಪರೆಯ ತಳಮುಟ್ಟುವ ವಿಶ್ಲೇಷಣೆಯನ್ನು ಸಾಧಿಸಿರುವ ಈ ಕೃತಿಯು ದಲಿತ ವಿಚಾರದ ಮೂಲನೆಲವಾದ ಮಹಾರಾಷ್ಟ್ರದಲ್ಲೂ ಅಪಾರ ಮನ್ನಣೆ ಪಡೆದಿದೆ.
ಜೀವಂತ ಪಾತ್ರಗಳು, ಇಡೀ ಇತಿಹಾಸವನ್ನು ಧ್ವನಿಸುವ ಮಿತ್ಗಳ ಕಲಾತ್ಮಕ ಬಳಕೆ ಪರಂಪರೆಯೊಳಗೇ ಇರುವ ಕ್ರಾಂತ ದೃಷ್ಟಿಯ ಆವಿಷ್ಕಾರಗಳಿಂದ ‘ದಾಟು’ವು ಭಾರತೀಯ ಬರವಣಿಗೆಯ ಉತ್ತಮ ಮಾದರಿಯಾಗಿದೆ. ಭಾರತದ ಎಲ್ಲ ಭಾಷೆಗಳಿಗೂ, ಇಂಗ್ಲಿಷಿಗೂ ಅನುವಾದವಾಗಿದೆ.