SLB

ಭಿತ್ತಿ

Year : 1996
Publisher : Sahitya Bhandara, Bengaluru
Reprints : 11

ಕಲಾವಿದನ ಜೀವನಭಿತ್ತಿ ಮತ್ತು ಅವನ ಸೃಷ್ಟಿಗಳ ಪರಸ್ಪರ ಸಂಬಂಧವು ರಹಸ್ಯಪೂರ್ಣವಾದುದು. ಜೀವನದ ಪರಿಮಿತಿಗಳನ್ನು ದಾಟಿ ಕೌತುಕಮಯ ವಲಯಕ್ಕೆ ಬೆಳೆಯದೆ ಕಲೆಯ ಆವಿರ್ಭವವಾಗುವುದಿಲ್ಲ. ಚಿತ್ರವು ಮೂಡಿದ ನಂತರ ಭಿತ್ತಿಯು ಇಲ್ಲದೆ ಆಗಿಬಿಡುತ್ತದೆ. ಕಲಾಕೃತಿಯನ್ನು ಅರಿಯಲು ವಾಸ್ತವಾವಾಗಿ ಜೀವನಚರಿತ್ರೆಯ ಅಗತ್ಯವಿಲ್ಲ. ಈ ನೆರವು ಆ ಅರಿವಿಗೆ ಬಾಧಕವೂ ಆಗಬಹುದು.
ಆದರೆ ಕೃತಿಗಳನ್ನು ಓದಿ ಲೇಖಕನ ಜೀವನದ ಘಟನೆಗಳನ್ನು ಅನ್ಯರು ತಮ್ಮ ತಮ್ಮ ಇಚ್ಛೆಯಂತೆ ಕಲ್ಪಿಸಿಕೊಳ್ಳುವುದನ್ನು ತಪ್ಪಿಸಲೆಂದು ಕೆಲವು ಸ್ನೇಹಿತರು ಒತ್ತಾಯಿಸಿದ್ದರ ಫಲವಾಗಿ ಈ ಆತ್ಮವೃತ್ತಾಂತ ಮೂಡಿಬಂದಿದೆ. ಈ ಬರಹದ ನಂತರ ಭೈರಪ್ಪನವರು ಹೊಸತೊಂದು ಕಾದಂಬರಿಯನ್ನು ಬರೆದಿರುವುದು, ಆತ್ಮಚರಿತ್ರೆಯನ್ನು ಬರೆದರೆ ಅನುಭವದ ಬೀಜಗಳು ಹೊರಬಿದ್ದು ಸೃಜನಶೀಲತೆಯು ನಿಂತುಹೋಗಬಹುದೆಂಬ ಶಂಕೆಗೆ ಆಧಾರವಿಲ್ಲವೆಂಬುದನ್ನು ತೋರಿಸುತ್ತದೆ. ಸಾಹಿತಿಯ ಜೀವನದಲ್ಲಿ ಗುರುತಿಸಬಹುದಾದ ಅಂಶಗಳ ಹಂಗಿಲ್ಲದೆಯೂ ಸಾಹಿತ್ಯವು ಸೃಷ್ಟಿಯಾಗುತ್ತದೆ. ಅಂಥದನ್ನು ಸೃಷ್ಟಿಸುವುದೇ ಪ್ರತಿಭೆಯ ಗುರುತು.

Back To Top