Date : 22-12-2016, 4:48 ಅಪರಾಹ್ನ
ಎಮ್.ಬಿ.ಬಿ.ಎಸ್. ಮಾಡಿದ ಒಬ್ಬ ತರುಣ ತನ್ನ ಹಳ್ಳಿಯಲ್ಲಿ ಗಾಂಧಿಯ ಮಾರ್ಗದಲ್ಲಿ ಸೇವೆ ಮಾಡತೊಡಗಿ ಜನಾದರಣೆ ಗಳಿಸುತ್ತಾನೆ. ಅವನ ಜನಾದರಣೆಯನ್ನು ಬಳಸಿಕೊಳ್ಳುವ ತಂತ್ರಹೂಡಿ ಆಳುವ ಪಕ್ಷವು ಇನ್ನೂ ಹೆಚ್ಚು ಸೇವೆ ಮಾಡುವ ಅವಕಾಶಗಳು ದೊರೆಯುತ್ತವೆಂಬ ಆಮಿಷ ಹೂಡಿ ಅವನನ್ನು ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸುತ್ತದೆ. ಚುನಾವಣಾ ಓಡಾಟದಲ್ಲಿ ತೊಡಗಿದ ಅವನು ಒಬ್ಬ ರೋಗಿಗೆ ಗಮನಕೊಡದೆ ಆ ರೋಗಿ ಸಾಯುತ್ತಾನೆ. ವ್ಯೆದ್ಯನು ಚುನಾವಣೆಯಲ್ಲಿ ಸೋಲುತ್ತಾನೆ. ಮಂತ್ರಿಗಳ ಚುನಾವಣಾ ಫಂಡಿಗೆ ತನ್ನ ಆದಾಯದಮಿತಿಮೀರಿ ಸಾಲಮಾಡಿ ಹಣ ಒದಗಿಸಿದ ಒಬ್ಬ ಕಿರು […]
Read More
Date : 22-12-2016, 4:40 ಅಪರಾಹ್ನ
ಎಷ್ಟೋ ಹೊತ್ತಿನ ನಂತರ ಭೋಸ್ಲೆಯ ಧ್ವನಿ: ‘ಕಲೆಯನ್ನ ನೋಡಿದಾಗ ಸ್ವರ್ಗಪ್ರವೇಶ ಮಾಡಿದ ಹಾಗಾಗುತ್ತೆ. ಕಲಾವಿದನ ಒಳ ಹೊಕ್ಕಾಗ ಬೇರೆಯೇ ಇರುತ್ತೆ ಯಾಕೆ ಈ ಕಾಂಟ್ರಡಿಕ್ಷನ್ ?’
Read More
Date : 22-12-2016, 4:38 ಅಪರಾಹ್ನ
ಕಾನಿಸ್ಟೇಬಲ್ ನಂಜುಂಡೇ ಗೌಡ ಮುಗುಳ್ನಕ್ಕ. ಹಳ್ಳಿಯ ಅಭ್ಯಾಸದ ಅವನ ನಗೆಯಲ್ಲಿ ಮುಗುಳು ಮತ್ತು ಗಟ್ಟಿ ನಗೆಗಳ ವ್ಯತ್ಯಾಸ ಹೆಚ್ಚು ಗೊತ್ತಾಗಲಿಲ್ಲ. ‘ಯಾಕೆ ನಗ್ತೀರ ?’ ಕಂಬಿಗಳ ಒಳಗಿದ್ದ, ಬಿ.ಇ. ಓದಿ ಉದ್ಯಮಪತಿಯಾದ ಇವನು ಕೇಳಿದ. ‘ಓದಿದ ಗಂಡಸರೆಲ್ಲ ಎಂಗಸರಾಯ್ತಾರೆ. ಓದಿದ ಎಂಗಸರೆಲ್ಲ ಗಂಡಸರಾಯ್ತಾರೆ.’ ಎಂದು ಅವನು ಈಗ ಗಟ್ಟಿಯಾಗಿ ನಕ್ಕ. * * * ‘ಯು ಆರ್ ಮೈ ಕಸಿನ್,’ ಬೆಂಗಳೂರಿನ ಅವಳು ಹಳ್ಳಿ ಮನೆಯ ಹಿತ್ತಲಿನ ಪರಂಗಿ ಗಿಡದ ಹತ್ತಿರ ಅವನನ್ನು ಮಾತನಾಡಿಸಿದಳು. ‘ನಿನಗೆ ಯಾರು […]
Read More
Date : 22-12-2016, 4:36 ಅಪರಾಹ್ನ
ಸೃಷ್ಟಿಶಕ್ತಿಯಿಂದ ವಿಜೃಂಭಿಸುವ ಜೀವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನಪರಿಸ್ಥಿತಿಯ ತಾಕಲಾಟವೇ ‘ಜಲಪಾತ’ದ ಕಥಾವಸ್ತು. ನೀರು ಮತ್ತು ಮಣ್ಣಿನ ಶಕ್ತಿಯಿಂದ ಕಂಗೊಳಿಸುವ ವನಶ್ರೀ, ಗಂಡು ಹೆಣ್ಣುಗಳ ಮೂಲಶಕ್ತಿಯಾದ ಜೀವನವಿಕಾಸ, ಮತ್ತು ಬೌದ್ಧಿಕಸ್ತರದಲ್ಲಿ ಆವಿರ್ಭವಿಸುವ ಕಲಾಸೌಂದರ್ಯ-ಇವು ಮೂರು, ವಿವಿಧಸ್ತರಗಳಲ್ಲಿ ಪ್ರಕಟವಾಗುವ ಒಂದೇ ಮೂಲಶಕ್ತಿ ಎಂಬುದನ್ನು ಕಾದಂಬರಿಯ ಅಂಗಗಳಾಗಿ ಬೆಳೆದಿರುವ ಪ್ರತೀಕಗಳು ಎತ್ತಿತೋರಿಸುತ್ತವೆ. ಸಂಯೋಗದ ಕರೆ ಮತ್ತು ಕ್ರಿಯೆ, ಗರ್ಭದ ವಿಕಾಸ, ಜನನಕ್ಕೆ ಪೂರ್ವಭಾವಿಯಾದ ನೋವಿನ ಅನುಭವ, ಮೊದಲಾದ ಸೃಷ್ಟಿಯ ಹಲವು ಹಂತಗಳನ್ನು ಅನುಭವದ ಹೊಚ್ಚ ಹೊಸತನದಿಂದ ಭಾಷೆಯಲ್ಲಿ ಹಿಡಿದಿಡಲು […]
Read More
Date : 22-12-2016, 4:34 ಅಪರಾಹ್ನ
ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ. ‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ.
Read More
Date : 22-12-2016, 4:32 ಅಪರಾಹ್ನ
ಗ್ರಹಣ, ಅಸತ್ಯವು ಸತ್ಯವನ್ನು ಆವರಿಸುವ ಕ್ರಿಯೆ. ಸಮಾಜೋದ್ಧಾರಕ್ಕೆ ಅಗತ್ಯವಾದುದು ವ್ಯಕ್ತಿಯ ವರ್ಚಸ್ಸೊ ಅಥವಾ ಸಂಘಟನೆಯ ಧ್ಯೇಯವೊ? ನಾಮರೂಪಾತ್ಮಕ ಪ್ರಪಂಚದ ಉಪಾಧಿಗಳು ಆತ್ಮೋನ್ನತಿಗೆ ತಡೆಗಳಾದರೆ ಅದೇ ಉಪಾಧಿಗಳು ಸಮಾಜೋದ್ದಾರದ ಸಾದನಗಳಾತ್ತವೆಯೆ? ಹೀಗೆ ಸನ್ಯಾಸಿಯ ಸತ್ಯಾನ್ವೇಷಣೆ ಮತ್ತು ಸಮಾಜದಲ್ಲಿ ಸ್ಥಾಪಿತವಾಗಿರುವ ನಂಬಿಕೆಗಳ ನಡುವೆ ಏರ್ಪಡುವ ಮೌಲ್ಯ ಸಂಘರ್ಷದ ವಿವಿಧ ಮಜಲುಗಳನ್ನು ಪರಾಮರ್ಶಿಸುವ ಕಾದಂಬರಿ ಗ್ರಹಣ.
Read More
Date : 22-12-2016, 4:29 ಅಪರಾಹ್ನ
ಗಂಡುಹೆಣ್ಣಿನ ಸಂಬಂಧದ ವಿಶ್ಲೇಷಣೆಯು ಪ್ರಪಂಚದ ಎಲ್ಲ ಪ್ರಮುಖ ಸಾಹಿತ್ಯ ಕೃತಿಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ನಲವತ್ತೆಂಟು ವರ್ಷ ಕಳೆದರೂ ಪದೇ ಪದೇ ಮರುಮುದ್ರಣ ಕಾಣುತ್ತಾ ಸಾಗಿರುವ ಈ ಕೃತಿಯ ಸಶಕ್ತ ಸನ್ನಿವೇಶ, ಜೀವಂತ ಪಾತ್ರಚಿತ್ರಣ ಮೊದಲಾದ ಗುಣಗಳಿಂದ ನಮ್ಮನ್ನು ನೆನಪಿನಲ್ಲಿ ಮುಳುಗಿಸುತ್ತದೆ.
Read More
Date : 22-12-2016, 4:27 ಅಪರಾಹ್ನ
ಹಿಂದೂಸ್ಥಾನಕ್ಕೆ ಹೊರಗಿನಿಂದ ಅಲೆಯಲೆಯಾಗಿ ಬಂದ ಜನಕ್ಕೆ ಲೆಕ್ಕವಿಲ್ಲವಾದರೂ ಅವರಲ್ಲಿ ಬಹುಭಾಗ ಜನರು ಸಾಂಸ್ಕೃತಿಕವಾಗಿ ಇಲ್ಲಿಯವರೇ ಆದರು. ರಾಷ್ಟ್ರಕ್ಕೆ ಹೊರಗಿನಿಂದ ಬಂದ ಮತಪ್ರಚಾರಕರು ಮಾತ್ರ ಇಲ್ಲಿಯ ಸಂಸ್ಕೃತಿಗೆ ತದ್ವಿರುದ್ಧವಾದ ಬೇರೊಂದು ಸಂಸ್ಕೃತಿಯನ್ನು ಬಿತ್ತಲು ಪ್ರಯತ್ನಿಸಿದರು. ಮತಾಂತರವು ಕೆಲವು ವ್ಯಕ್ತಿಗಳ ಜೀವನದಲ್ಲಿ ಕ್ವಚಿತ್ತಾಗಿ ನಡೆಯುವ ಘಟನೆಯಲ್ಲ. ಅದೊಂದು ಸಾಂಸ್ಕೃತಿಕ ಘರ್ಷಣೆ. ಭಾರತೀಯ ಪರಂಪರೆಯಲ್ಲಿ ಧರ್ಮ, ಸಂಸ್ಕೃತಿ, ಎರಡೂ ಅವಿಭಿನ್ನವಾದ ರೂಪಗಳು. ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ ‘ಧರ್ಮಶ್ರೀ’ಯ ವಸ್ತು. ನಾಯಕನ ಜೀವನ ಮತ್ತು ಸಮಸ್ಯೆ , ಎರಡೂ […]
Read More
Date : 22-12-2016, 4:24 ಅಪರಾಹ್ನ
೧೫೦ ಅಡಿ ಅಗಲ, ೩೦೦ ಅಡಿ ಉದ್ದದ ಆಕಾಶ ನೌಕೆಯನ್ನು ಕಟ್ಟಿ ಅದರಲ್ಲಿ ಒಬ್ಬ ಗಂಡು, ಒಬ್ಬಳು ಹೆಣ್ಣನ್ನು ಕೂರಿಸಿ ೪.೬ ಜ್ಯೋತಿರ್ವರ್ಷ ದೂರದಲ್ಲಿರುವ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರಮಂಡಲವನ್ನು ತಲುಪುವ ಯೋಜನೆಗೆ ಕಳಿಸುತ್ತಾರೆ. ಸೂರ್ಯಮಂಡಲದಲ್ಲಿ ಸೃಷ್ಟಿಸಿಕೊಂಡ ನೈತಿಕ ನಿಯಮಗಳು ಸೂರ್ಯನ ಗುರುತ್ವಾಕರ್ಷಣೆಯ ವಲಯದ ಆಚೆಗೆ ಹೋದಮೇಲೂ ಸಿಂಧುವಾಗುತ್ತವೆಯೆ ? ಎಂಬಂಥ ಪ್ರಶ್ನೆಗಳನ್ನು ಈ ಪಾತ್ರಗಳು ಎದುರಿಸಬೇಕಾಗುತ್ತದೆ. ಭೈರಪ್ಪನವರ ಪಾತ್ರಶೋಧನೆಯು ಇದುವರೆಗೆ ವಿಸ್ತರಿಸಿಕೊಂಡಿರದ ವ್ಯಾಪ್ತಿಗೆ ‘ಯಾನ’ದಲ್ಲಿ ಬೆಳೆದಿದೆ. ಕನ್ನಡ ಸಾಹಿತ್ಯದಲ್ಲಿ ಇಲ್ಲಿಯತನಕ ಕಾಣದ ವಸ್ತುವು ಈ ಕಾದಂಬರಿಯಲ್ಲಿ ಜೀವಂತವಾಗಿ […]
Read More
Date : 22-12-2016, 3:56 ಅಪರಾಹ್ನ
ಕುಸ್ತಿಪಟುಗಳ ಬದುಕು ರೋಮಾಂಚಕಾರಿಯಾದಷ್ಟೇ ಗುಂಡಾಂತರಪೂರ್ವವೂ ಅಗಿದೆ. ಕುಸ್ತಿಪಟುವಿಗೆ ದೊರೆಯುವ ಮಾನಸಮ್ಮಾನದ ಹಿಂದೆ ಎಂತಹ ಸಂಯಮ ಬೇಕು ಎನ್ನುವುದು ಯಾರೂ ಆರಿಯರು. ಕುಸ್ತಿಕಣದ ನಿಕಟ ಸಂಪರ್ಕವಿರಿಸಿಕೊಂಡ ಈ ಕಾದಂಬರಿಕಾರರು ಕುಸ್ತಿಪಟುಗಳ ಜೀವನವನ್ನು ಸೌಹಾರ್ದತೆಯಿಂದ ಕಂಡುದೇ ಈ ಕಾದಂಬರಿಯಲ್ಲಿ ವಾಸ್ತವಿಕವಾಗಿದೆ; ಕಲಾತ್ವಕವಾಗಿದೆ.
Read More
Date : 22-12-2016, 7:56 ಪೂರ್ವಾಹ್ನ
ತನ್ನನ್ನು ಅವಿಚಿಕೊಂಡ ಅನ್ಯಾಯಗಳನ್ನು ಎತ್ತಿ ಎಸೆಯುವ ಭಾವಶಕ್ತಿ ಇಲ್ಲದ ಮನಸ್ಸು ತನ್ನನ್ನು ತಾನೇ ನಾಶಮಾಡಿಕೊಳ್ಳುವ ತನ್ನನ್ನು ಪ್ರೀತಿಸುವವರ ಮೇಲೆ ಕ್ರೌರ್ಯವನ್ನು ಮಸೆಯುವ ವಿಕೃತಿಗೆ ತಿರುಗಿರುವುದೇ ‘ ಅಂಚು’ವಿನ ವಸ್ತುವಾಗಿದೆ. ಜೀವನಪ್ರೀತಿ ಮತ್ತು ಸಾವಿನ ಪ್ರಪಾತಗಳ ಅಂಚಿನಲ್ಲಿ ನಿಂತಿರುವ ವ್ಯಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಲು ಬೇಕಾದ ಪ್ರೀತಿಯು ಈ ಕ್ರೌರ್ಯಕ್ಕೆ ವಿರುದ್ದತೂಕವನ್ನು ಸೃಷ್ಟಿಸುತ್ತದೆ. ಈ ಸ್ಥೂಲವಸ್ತುವಿನ ಹಂದರದಲ್ಲಿ ಸ್ಪುಟವಾಗಿ ನಿಲ್ಲುವ ಪಾತ್ರಗಳು ಮಾನವಸನ್ನಿವೇಶಗಳು ಹಾಗೂ ಮನಃಪ್ರವೃತ್ತಿಯ ಗುಹ್ಯಸ್ಥಾನಗಳಿಗೆ ಟಾರ್ಚ್ ಹಾಕಿ ತೋರಿಸುವ ತಂತ್ರ ವಿಶ್ಲೇಷಣೆಗಳಿಂದ ಭೈರಪ್ಪನವರು ಈ ಕಾದಂಬರಿಯಲ್ಲಿ ಹೊಸ […]
Read More
Date : 22-12-2016, 7:53 ಪೂರ್ವಾಹ್ನ
ಈ ಕಾದಂಬರಿಯ ಪಾತ್ರಗಳು ತಮ್ಮ ತಮ್ಮ ಜೀವನವನ್ನು ಹುಡುಕಿಕೊಳ್ಳುವ ಪರಿಕ್ರಮದಲ್ಲಿ ‘ಗೃಹಭಂಗ’ದ ವಿಶ್ವನಾಥನ ಜೀವನವು ಓದುಗರಿಗೆ ಸ್ಪುಟವಾಗುತ್ತಾ ಹೋಗುತ್ತದೆ. ಅಲೆಮಾರಿಯಾಗಿ, ಹೋಟೆಲು ಕೆಲಸಗಾರನಾಗಿ, ಜಟಕಾ ಹೊಡೆಯುವವನಾಗಿ, ಪ್ರಿಯಕರನಾಗಿ, ಇನ್ನೂ ಹಲವು ರೀತಿಯಲ್ಲಿ ಅವನು ಸಾಗಿದ ದಾರಿಯಿಂದ ವಿವಿಧ ಪಾತ್ರಗಳು ಆಕರ್ಷಿತರಾಗುತ್ತಾರೆ; ತಮ್ಮನ್ನು ಅವನೊಡನೆ ಹೋಲಿಸಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಯಾರಿಗೂ ಅವನ ಜೀವನದ ಸಮಗ್ರ ಚಿತ್ರ ಕಾಣುವುದಿಲ್ಲ. ಈ ಕಾದಂಬರಿಯಲ್ಲಿ ಭೈರಪ್ಪನವರು ಸಾಧಿಸಿರುವ ತಂತ್ರಕೌಶಲ, ಜೀವನಗ್ರಹಿಕೆ ಬುದ್ಧಿಭಾವ, ಇಂದ್ರಿಯಾತ್ಮಕ ಚಿತ್ರಗಳ ಸಮರಸ ಹದವು ಕನ್ನಡ ಕಾದಂಬರೀಲೇಖನದಲ್ಲಿ ಒಂದು ಮುಖ್ಯ […]
Read More