SLB

ಆವರಣ

ಇದು ಭೈರಪ್ಪನವರ  ಎರಡನೆಯ  ಐತಿಹಾಸಿಕ  ಕಾದಂಬರಿ . ಎಂಟನೆಯ  ಶತಮಾನದ  ಸಂಧಿಕಾಲದ  ಅಂತಸ್ಸತ್ತ್ವವನ್ನು   ‘ಸಾರ್ಥ’ದಲ್ಲಿ  ಕಾದಂಬರಿಯ ರೂಪದಲ್ಲಿ  ಆವಿಷ್ಕರಿಸಿದ್ದಾರೆ. ’ಆವರಣ’ ದಲ್ಲಿ  ‘ಸಾರ್ಥ’ ದ  ಕಾಲದ  ಆನಂತರದ ಸತ್ಯವನ್ನು ಚಿತ್ರಿಸುವ ಪ್ರಯತ್ನಮಾಡಿದ್ದಾರೆ….. ಸಂವಹನ  ಪ್ರಕ್ರಿಯೆಯಲ್ಲಿ  ಹುಟ್ಟುವ ಸಮಸ್ಯೆಗಳನ್ನು ಪರಿಹರಿಕೊಳ್ಳುವ  ವಿಧಾನಗಳನ್ನು  ತಂತ್ರವೆಂದು ಕರೆಯಬಹುದು. ಇತಿಹಾಸ  ಮತ್ತು ಇತಿಹಾಸಕಾರ ಇಬ್ಬರನ್ನೂ ‘ ಆವರಣ ‘ವು  ಒಳಗೊಳ್ಳುತ್ತದೆ.

Read More

ಭಿತ್ತಿ

ಕಲಾವಿದನ ಜೀವನಭಿತ್ತಿ ಮತ್ತು ಅವನ ಸೃಷ್ಟಿಗಳ ಪರಸ್ಪರ ಸಂಬಂಧವು ರಹಸ್ಯಪೂರ್ಣವಾದುದು. ಜೀವನದ ಪರಿಮಿತಿಗಳನ್ನು ದಾಟಿ ಕೌತುಕಮಯ ವಲಯಕ್ಕೆ ಬೆಳೆಯದೆ ಕಲೆಯ ಆವಿರ್ಭವವಾಗುವುದಿಲ್ಲ. ಚಿತ್ರವು ಮೂಡಿದ ನಂತರ ಭಿತ್ತಿಯು ಇಲ್ಲದೆ ಆಗಿಬಿಡುತ್ತದೆ. ಕಲಾಕೃತಿಯನ್ನು ಅರಿಯಲು ವಾಸ್ತವಾವಾಗಿ ಜೀವನಚರಿತ್ರೆಯ ಅಗತ್ಯವಿಲ್ಲ. ಈ ನೆರವು ಆ ಅರಿವಿಗೆ ಬಾಧಕವೂ ಆಗಬಹುದು. ಆದರೆ ಕೃತಿಗಳನ್ನು ಓದಿ ಲೇಖಕನ ಜೀವನದ ಘಟನೆಗಳನ್ನು ಅನ್ಯರು ತಮ್ಮ ತಮ್ಮ ಇಚ್ಛೆಯಂತೆ ಕಲ್ಪಿಸಿಕೊಳ್ಳುವುದನ್ನು ತಪ್ಪಿಸಲೆಂದು ಕೆಲವು ಸ್ನೇಹಿತರು ಒತ್ತಾಯಿಸಿದ್ದರ ಫಲವಾಗಿ ಈ ಆತ್ಮವೃತ್ತಾಂತ ಮೂಡಿಬಂದಿದೆ. ಈ ಬರಹದ ನಂತರ […]

Read More

ದಾಟು

‘ದಾಟು’ ಜಾತಿ ಸಮಸ್ಯೆಯನ್ನು ಕುರಿತು ಭಾರತೀಯ ಭಾಷೆಗಳಲ್ಲಿ ಬಂದಿರುವ ಕಾದಂಬರಿಗಳಲ್ಲೆಲ್ಲ ವಿಶಿಷ್ಟವಾದ ಕೃತಿ ಎಂದು ಪರಿಗಣಿತವಾಗಿದೆ. ಪಶ್ಚಿಮದಿಂದ ಎರವಲು ಪಡೆದ ಅಥವಾ ಸಮಕಾಲೀನ ರಾಜಕೀಯ ಒತ್ತಡದಿಂದ ಹುಟ್ಟಿದ ಸಿದ್ಧಾಂತಗಳನ್ನವಲಂಬಿಸದೆ ಸಾಂದ್ರವಾದ ಜೀವನಾನುಭವವನ್ನೊಳಗೊಂಡು ಭಾರತೀಯ ಸಾಮಾಜಿಕ ಪರಂಪರೆಯ ತಳಮುಟ್ಟುವ ವಿಶ್ಲೇಷಣೆಯನ್ನು ಸಾಧಿಸಿರುವ ಈ ಕೃತಿಯು ದಲಿತ ವಿಚಾರದ ಮೂಲನೆಲವಾದ ಮಹಾರಾಷ್ಟ್ರದಲ್ಲೂ ಅಪಾರ ಮನ್ನಣೆ ಪಡೆದಿದೆ. ಜೀವಂತ ಪಾತ್ರಗಳು, ಇಡೀ ಇತಿಹಾಸವನ್ನು ಧ್ವನಿಸುವ ಮಿತ್ಗಳ ಕಲಾತ್ಮಕ ಬಳಕೆ ಪರಂಪರೆಯೊಳಗೇ ಇರುವ ಕ್ರಾಂತ ದೃಷ್ಟಿಯ ಆವಿಷ್ಕಾರಗಳಿಂದ ‘ದಾಟು’ವು ಭಾರತೀಯ ಬರವಣಿಗೆಯ ಉತ್ತಮ […]

Read More

Back To Top